ಸಂಜೆ ನಾನು, ಸಿದ್ದ, ನಿಂಗ, ಕಲ್ಲು ರಾಜ, ದೋಬಿ ರಂಗ ಎಲ್ಲಾರೂ 90 ಹಾಕ್ತಾ ಇದ್ವಿ. ಆಟೊತ್ತಿಗೆ ಸಿದ್ದ ಅಂದ. ಏನ್ಲಾ ಇದು ಇವತ್ತು ಜನಾರ್ದನ ರೆಡ್ಡಿ ನ್ಯೂಸ್ ಮಾಡುವಾ ಅಂತಾ ಮಾಧ್ಯಮದೋರು ಹೋದ್ರೆ, ವಕೀಲರು ಟಿವಿ ಮಾಧ್ಯಮದೋರಿಗೆ ನಾಯಿ ಹೊಡೆದಂಗೆ ಹೊಡೆದವ್ರೆ ಕಲಾ ಅಂದ. ಯಾಕ್ಲಾ ಅಂದೆ. ಲೇ ಕಳೆದ ತಿಂಗಳು ಅವರು ಸ್ಟ್ರೈಕ್ ಮಾಡೋ ಟೇಂಮ್ನಾಗೆ ಟಿವಿ ಮಾಧ್ಯಮದವರು ಹಂಗೇ ವಿಡಿಯೋ ಹಿಡಿದು, ಇವರು ಗೂಂಡಾ ರೀತಿ ವರ್ತಿಸುತ್ತಾ ಇದಾರೆ ಅಂತಾ ತೋರಿಸಿದ್ರಂತೆ, ಅದಕ್ಕೆ ಹೊಡೆದವ್ರೆ ಕಲಾ . ನೋಡ್ಲಾ ಮಾಧ್ಯಮದೋರು ಸಮಾಜದಾಗೆ ಏನೂ ಅಂತಾ ತೋರಿಸಕ್ಕೆ ಹೋಯ್ತಾರೆ ಹೊಡೆದಿದ್ದು ತಪ್ಪು ಅಲ್ವೇನ್ಲಾ ಅಂದ ಸಿದ್ದ. ವಕೀಲರು ನಮ್ಮ ಮ್ಯಾಕೆ ಯಾರು ಕೇಸು ಹಾಕಕ್ಕಿಲ್ಲಾ, ಹಂಗೇನಾದ್ರೂ ಹಾಕಿದ್ರೆ ನಮಗೆ ಹೊರಗೆ ಬರೋದು ಹೆಂಗೆ ಅಂತಾ ಗೊತ್ತು. ಅಷ್ಟಕ್ಕೂ ಕೆಲ ರಾಜಕಾರಣಿಗಳು ಮತ್ತು ಕೆಲ ಅಧಿಕಾರಿಗಳು ನಿಷ್ಠೆಯಿಂದ ಇರದ ಕಾರಣ, ಪೊಲೀಸರು ಮತ್ತು ರಾಜಕಾರಣಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹಂಗಾಗಿ ವಕೀಲರು ಯಾವುದಕ್ಕೂ ಹೆದರದೆ ಹಿಂಗೆ ಮಾಡವ್ರೆ, ಲೇ ಟಿಆರ್ ಪಿ ಅಂತಾ ಹೋಗ್ಬಾರದು ಕಲಾ ಅಂದ ನಾಗ.
ಅಲ್ಲ ಕಲಾ, ಇವತ್ತಿನ ದಿನ ನಡೆದ ಘಟನೆಯ ಬಗ್ಗೆ ಟಿವಿಯೋರು ಇಷ್ಟೆಲ್ಲಾ ಮಾತಾಡ್ತಾರೆ. ಅದೇ ಗ್ರಾಮಾಂತರ ಭಾಗದ ಪತ್ರಕರ್ತನಿಗೆ ಹಿಂಗೆ ಆದಾಗ ಯಾವ ಟಿವಿಯೋರು ಸಪೋರ್ಟ್ ಮಾಡಿದಾರೆ ಹೇಳ್ಲಾ, ಸಾಕಷ್ಟು ಹಲ್ಲೆ ಆಗಿದೆ. ಮಲ್ಡರ್ ಆಗಿದೆ. ಕೆಳಗೆ ಒಂದು ಲೈನ್ ಹಾಕೋದು ಬಿಟ್ಟರೆ ಏನೂ ಇಲ್ಲ. ಪ್ರೋತ್ಸಾಹನೂ ಇಲ್ಲ. ಜಿಲ್ಲೆ ಟಿವಿಯೋರು, ತಮಗೆ ಬೇಕಾದ ವರದಿಯನ್ನು ತಾಲ್ಲೂಕು ಭಾಗದಿಂದ ಪಡೆಯುತ್ತಾರೆಯೇ ಹೊರೆತು, ಯಾವುದೇ ರೀತಿಯ ಪ್ರೋತ್ಸಾಹವನ್ನು ತಾಲ್ಲೂಕು ಹಾಗೂ ಗ್ರಾಮಾಂತರ ಮಟ್ಟದ ವರದಿಗಾರರಿಗೆ ಈವರೆಗೆ ನೀಡಿಲ್ಲ. ತಮ್ಮ ಸ್ವಂತದ ಲಾಭ ಪಡೆಯುತ್ತಾರೆ. ಹಾಗಾದರೆ ಇದೇ ಏನ್ಲಾ ಪತ್ರಿಕಾ ಧರ್ಮ ಅಂದರೆ ಅಂದೆ. ಹಂಗಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಅಂದ ಪತ್ರಕರ್ತ ದೋಬಿ ರಂಗ. ಬುಡ್ಲಾ ಪತ್ರಕರ್ತರೆಲ್ಲಾ ಒಗ್ಗಟ್ಟಾಗಲಿ ಎಂದ ಸಿದ್ದ,
ನೋಡ್ಲಾ ಪತ್ರಕರ್ತರು ಎಂದಾಕ್ಷಣ ಎಲ್ಲರೂ ಒಗ್ಗಾಟ್ಟಾಗಿ ಇದ್ದಾರೆ ಎಂದರೆ ತಪ್ಪು. ನಿಜವಾದ ಪತ್ರಕರ್ತರನ್ನು ಬಿಟ್ಟು ಬರೆಯದೇ ಇರೋರಿಗೆ ಹಾಗೇ ತಮಗೆ ಬೇಕಾದವರಿಗೆ, ಪ್ರೋತ್ಸಾಹಿಸೋರಿಗೆ, ನಾವ್ಯಾಕ್ಲಾ ಪ್ರೋತ್ಸಾಹಿಸಬೇಕು ಅಂದ ರಾಜ. ರಾಜಕಾರಣಿಗಳ ಜೊತೆಗೆ ಕೈ ಜೋಡಿಸಿ ವಿವಿಧೆಡೆ ಸೈಟ್, ಲಾಭ ಪಡೆದೋರು ಇದಾರೆ. ಟಿಆರ್ ಪಿಗಾಗಿ ಹೋರಾಟ ಮಾಡಿ, ಹೆಚ್ಚು ಕಡಿಮೆ ಆದಾಗ ಎಲ್ಲರೂ ಬೇಕು ಇದು ಯಾವ ನ್ಯಾಯ ಅಂದ ಸೀನ. ಜಿಲ್ಲಾ ಮಟ್ಟದ ಪತ್ರಕರ್ತರು ತಮ್ಮ ಸ್ವಂತಕ್ಕೆ ಏನು ಮಾಡ್ಕೊಬೇಕು ಅದೆಲ್ಲಾ ಮಾಡಿಕಂಡಿದಾರೆ. ಪತ್ರಿಕಾ ವರದಿಗಾರರು ಹಾಗೇ ಟಿವಿ ವರದಿಗಾರರರು ಅನ್ನೋ ಅಂತರವು ಅಂತೂ ಇದ್ದೇ ಇದೆ. ನಾವ್ಯಾಕೆ ತಲೆಕಡೆಸಿಕೊಳ್ಳಬೇಕು ಅಂದ ನಾಗ. ಲೇ ಬುಡ್ಲಾ ಅಂದ ನಾಗ.
ಲೇ ಇದನ್ನ ರೆಡ್ಡಿ ಮಾಡಿಸಿದಾರೆ ಅಂತಾ ಗುಮಾನಿ ಇದೆ ಕಲಾ ಅಂದ ನಾಗ. ಇರ್ಬೋದು ಕಲಾ, ಯಾಕೆ ಅಂದ್ರೆ, ಆ ವಯ್ಯ ಹಿಂಡಲಗಾ ಜೇಲಿಗೆ ಹೋಗಿದ್ದೆ ಮಾಧ್ಯಮದವರು ಅಂತಾ ಅನ್ಕಂಡಾಗಿದೆ ಎಂದ ಸಿದ್ದ. ಅಲ್ಲ ಕಲಾ ಯಡೂರಪ್ಪ ಮಾ.3ರ ನಂತರ ನೋಡಿ ಅಂದಿತ್ತು. ಅದು ಇರ್ಬೋದಾ ಅಂದ ಸಿದ್ದ, ಲೇ ವಯ್ಯ ಹಿಂಗೆಲ್ಲಾ ಮಾಡಕ್ಕಿಲ್ಲಾ, ಒಟ್ಟಾರೆಯಾಗಿ ಇದು ಸದಾನಂದ ಗೌಡರ ಕುತ್ತಿಗೆಗೆ ಬಂದೈತೆ ಅಂದಾ ಸೀನ.
ಪತ್ರಕರ್ತರು ಎಂದರೆ ಎಲ್ಲಾರೂ ಒಂದೇ, ಪತ್ರಿಕೆ ಮತ್ತು ಟಿವಿ ಅಂತಾ ಭಿನ್ನಾಭಿಪ್ರಾಯ ಇರಬಾರದು. ಇನ್ನಾದರೂ ಟಿವಿಯೋರು ಚಿಂತಿಸಲಿ, ಎಲ್ಲರೂ ಒಂದೇ ಅಂತಾ ಅಂದ ಸಿದ್ದ.

ನಿಮ್ಮ ಫೇಸ್ ಬುಕ್ ವಾಲ್ ನಲ್ಲಿ ಇಷ್ಟೇ ಇಷ್ಟು ಒಗ್ಗರಣೆ ಹಾಕಿದ ವಾಸನೆ ತೋರಿಸಿ ಇಲ್ಲಿಗೆ ಬರೋ ಹಂಗೆ ಮಾಡಿದ್ರಿ.. ಚೆನ್ನಾಗಿದೆ.. ಹೊಟ್ಟೆ ತುಂಬಿತು
ReplyDelete