ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು.....

ಒಂದು ಹಳ್ಳಿ, ಸೋಮಾರಿಗಳ ಒಂದು ಟೀಮ್, ಸಿದ್ದ, ಸೀನ, ಯಂಕ,ನಾಗ,ನಿಂಗ,ಸುಬ್ಬ. ಇವರ ಜೊತೆಗೆ ಹಳ್ಳಿಯೋರು ಸೇರ್ಕಂತಾ ಇರ್ತಾರೆ. ಇವರು ಕೂತಲ್ಲೇ ಎಲ್ಲಾ ಸಿಗಬೇಕು ಎನ್ನುವವರು. ಇವರಿಗೆ ರಾಜ್ಯದ, ದೇಶದ ರಾಜಕೀಯ ಬೇಕು. ಮನೆಗಳ ವಿಷಯ ಬೇಕು. ಗಲಾಟೆಯಾದ್ರೆ ತೀರ್ಮಾನ ಮಾಡಕ್ಕೆ ಹೋಗ್ತಾರೆ. ವ್ಯಕ್ತಿಗತ ಯಾರೂ ಕೆಟ್ಟೋರಲ್ಲ. ಆದ್ರೆ ತಾವೇ ಗ್ರೇಟ್ ಎನ್ನುವಂತಹ ವ್ಯಕ್ತಿತ್ವ. ಇವರು ಒಂದು ತರಾ ಮುಖಂಡರುಗಳೇ. ಇವರ ತರಲೆ ಏನಿರುತ್ತೆ ಬನ್ನಿ ನೋಡೋಣ...............

Friday, February 24, 2012

ಕೋಮಲ್ ಕಾಮಿಡಿ - 1

ಈಗ ಇಂಡಿಯಾ V/S ಪಾಕಿಸ್ತಾನ ಮ್ಯಾಚ್ ನಡೀತಾ ಇದೆ. ನಮ್ಮ ಟೀಂನ ಫಾಸ್ಟೆಸ್ಟ್ ಬೌಲರ್ ಆದ ಶ್ರೀಯುತ ಸುಬ್ಬರವರು ಇನ್ನು ಕೆಲವೇ ನಿಮಿಷಗಳಲ್ಲಿ ಓಡಿ ಬಂದು ಅಂಪೈರ್ ಅನ್ನು ದಾಟಿ ಬೌಲಿಂಗ್ ಮಾಡಲಿದ್ದಾರೆ.
ಪ್ರೇಕ್ಸಕ : ಎಲ್ರೀ ಬೆಳಗ್ಗೆ 8ರಿಂದ ಇದೇ ಮಾತು ಹೇಳ್ತಾ ಇದೀರಾ. ಆಗಲೇ 12ಗಂಟೆ ಆಯ್ತು. ಎಲ್ರೀ ಆ ಮುಂಡೇ ಮಗ ಬೌಲರ್.
ಕಾಮಿಟೇಟರ್ : ನೋಡಿ ಸಾ, ಇವರು ವಲ್ಡ್ ಪೇಮಸ್ ಬೌಲರ್, ಮನೆ ಬಿಟ್ಟು ಆಗಲೇ 3ದಿನ ಆಗೈತೆ. ಇನ್ನೇನು ಸ್ಟೇಡಿಯಂ ಒಳಿಕ್ಕೆ ಬಂದೇ ಬಿಡ್ತಾರೆ. ಪೆಸೆಲ್ ಬೌಲರ್ ಕಣ್ರೀ..........
ಪ್ರೇಕ್ಸಕ : ಅಯ್ಯೋ ಅವನ ಮಕ್ಕೆ ಇಡ್ಲಿ ಹಿಟ್ಟು ಹುಯ್ಯಾ. ಈ ತರಾ ಬೌಲಿಂಗ್ ಮಾಡೋ ಹಾಗಿದ್ರೆ, ಒನ್ ಡೇ ಮ್ಯಾಚನ್ನ ಟೆಸ್ಟ್ ಮಾಡಬೇಕಾಯ್ತದೆ ಕಣ್ರೀ........
ಅಂತೂ ಬಡ್ಡೆಐದ ಸಂಜೆ 4ಕ್ಕೆ ಬಂದು ಒಂದು ಬಾಲ್ ಹಾಕ್ದ. ಅದೂ ವೈಡ್ ಮತ್ತೆ ನೋ ಬಾಲ್.
ಯಾಕ್ಲಾ
ಲೇ ಓಡಿ, ಓಡಿ ಸಾಕಾಗಿ ಕಣ್ಣೆಲ್ಲಾ ಮಂಜಾಗಿತ್ತು ಕಲಾ. ವಿಕೆಟ್ ಇರದೇ ಕಾಣ್ಲಿಲ್ಲ ಕಲಾ. ಏಥೂ.
ಅಂಪೈರ್^ದು ಲೆಫ್ಟ್ ಸೋಲ್ದರ್ ಡಿಸ್ ಲೊಕೇಟ್ ಆಗಿತ್ತು. ಬಡ್ಡೆಐದ ಬ್ಯಾಟ್ಸ್ ಮನ್ ಮಕ್ಕಂಡಿದ್ದ, ಕೀಪರ್ ಕಿಸ್ಕಂಡಿದ್ದ. ಯಾಕ್ರಣ್ಣಾ, ಈ ಮುಂಡೇ ಮಗ ಸುಬ್ಬನ್ನ ಎಲ್ಲಿಂದ ಕರೆದುಕೊಂಡು ಬಂದ್ರೀ ಅನ್ನೋರು. ಕಡೆಗೆ ನಮ್ಮ ಕಪ್ತಾನ ಧೋನಿಗೆ 100ಮ್ಯಾಚಿಂದು ದಂಡ ಹಾಕಿದ್ರು. ಈಗ ಸುಬ್ಬ ಅಂದ್ರೆ ಸಾಕು, ಇಡೀ ಬಿಸಿಸಿಐಯೇ ನಡುಗುತ್ತೆ. ಹೆಂಗೆ ನಮ್ಮ ಸುಬ್ಬ. ಎರಡನೇ ಬಾಲ್ ಮಾಡಕ್ಕೆ ಹೋಗವ್ನೆ, ನಾಡಿದ್ದು ಬತ್ತೀನಿ ಅಂದಿದಾನೆ. ಬಂದ ಮೇಲೇನೆ ಗ್ಯಾರಂಟಿಯಾ............

0 ಪ್ರತಿಕ್ರಿಯೆಗಳು:

Post a Comment

ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ಬರೆಯಿರಿ